|| ಕಲ್ಪನಾಲೋಕ ||
ಅಪರಿಚಿತ ಕನ್ಯೆಯ ಮೇಲೆ
ಸ್ವರಚಿತ ಕವನ....
ವಣಿ೯ಸಿ ಹೊಗಳಿದೆ ಅವಳ
ಅಂದ-ಚೆಂದವನು ಈ ಭೂಮಂಡಲದಲಿ
ಇನ್ಯಾವ ವಸ್ತು ಅವಳಿಗೆ
ಸರಿಸಾಟಿಯಿಲ್ಲೆಂದು ಹೋಲಿಸಿ.||
ಅವಳದೆ ನೋಟವನ್ನು
ಮೈ ಮಾಟವನ್ನು
ಸೃಷ್ಟಿಸಿದೆ ವಿಶದವಾಗಿ
ನಯನ ತಾರೆ,ತ್ರಿಪುರ ಸುಂದರಿ,
ನಾಟ್ಯ ಮಯೂರಿಯೆಂದೆಲ್ಲಾ.
ಅವಳಲ್ಲಿ ನನ್ನ ಸವ೯ಸ್ವವನ್ನಡಗಿಸಿ,
ಅವಳನ್ನೇ ನನ್ನ ಬಾಳಿನ ಬೆಳೆಕಾಗಿಸಿ.||
ಹಠಮಾರಿ ಹೆಣ್ಣಿನ
ಮುಗ್ಧ ಚಿತ್ರಣ
ಬಿಡಿಸಿದೆ ಬಿಳಿ ಹಾಳೆಯ ಮೇಲೆ
ಕರಿ ಕುಂಚದಿ ಕಣ್ಣರೆಪ್ಪೆಯ ಮೇಲೆ
ಸವರಿದೆ ಇನ್ನಷ್ಟು ಮುಗ್ಧತೆಯನು
ಬಿಂಬಿಸಲು,ವಿವರವಾಗಿ ತೋರಿಸಲು.
ನೈಜ ಮುಖದ ಹಠತನ
ಮತ್ತೆ ತೋರಿತು ಸಹಜತನ.||
ಕಲ್ಪನಾಲೋಕದಲಿ ಮುಳುಗಿ
ನಾ ಹೋದೆ ಕರಗಿ
ನೀ ನೋಡದೆ ತಿರುಗಿ.
ಹೃದಯ ತಡಬಡಿಸುತ್ತಿದೆ ಮರುಗಿ
ತವಕದಿಂದ ಕಾಯುತ್ತಿದೆ ನಿನಗಾಗಿ
ಬರುವೆಯಾ.?
ನನ್ನ ಬಳಿಗೆ,ಈ ಘಳಿಗೆ.||
~ಗಮಯ(ಗಣೇಶ ಮ.ಯಲಿಗಾರ)
No comments:
Post a Comment